“ಹಲವಾರು ವರ್ಷ ನೆರಳಾಗಿ ನಿಂತಮರ ತೊಲೆಯಾಗಿ ಉಳಿಯಿತು ನೂರು ವರ್ಷ, ನೂರು ವರ್ಷ ಆಳಿದ ಅರಸ ಹೆಣವಾಗಿ ಉಳಿಯಲಿಲ್ಲ ನೂರುದಿವಸ”
ಒಳರೋಗಿಗಳ ಆರೈಕೆಯು ರೋಗಿಗಳಿಗೆ ಚಿಕಿತ್ಸೆ ನಿಡುವ ಒಂದು ವಿಧಾನವಾಗಿದ್ದು, ಇದು ಆಧುನಿಕ ಔಷಧಪ್ರಗತಿಯ ಸಮಗ್ರ ಚಿಕಿತ್ಸಾ ವಿಧಾನವಾಗಿದೆ. ರೋಗಿಗಳು ತೀವ್ರವಾಗಿ ಅನಾರೋಗ್ಯಕ್ಕೆ ಒಳಗಾದಾಗ ಆಸ್ಪತ್ರೆಗೆ ದಾಖಲಾಗುವುದನ್ನು ಖಚಿತ ಪಡಿಸುತ್ತವೆ. ರೋಗಿಗಳು ಒಳರೋಗಿಯಾಗಿ ಆರೈಕೆ ಆಗುವುದನ್ನು ವೈದ್ಯರಿಂದ ಹಾಗೂ ಔಷಧಗಳ ಮೂಲಕ ಪ್ರವೇಶ ಪಡೆದು ದಾಖಲಾಗಿ ರೋಗಿಯು ಚಿಕಿತ್ಸೆ ಪಡೆಯುವುದು ಒಳರೋಗಿ ವಿಧಾನವಾಗಿದೆ ಇದನ್ನೇ ಒಳರೋಗಿ ಆರೈಕೆ ಎನ್ನುತ್ತಾರೆ.
ನೊಂದವ್ಯಕ್ತಿಗಳ ಜೀವಕ್ಕೆ ಪರಿಹಾರ ಸಿಗುವ ಮಾರ್ಗಗಳೇ ಚಿಕಿತ್ಸಾ ವಿಧಾನಗಳು ಆಗಿವೆ.ಅಂತ ಚಿಕಿತ್ಸೆಗಳನ್ನು ಹಲವಾರು ರೀತಿಯಲ್ಲಿ ನೀಡಲಾಗುತ್ತದೆ ಅವು ಸಂಪ್ರದಾಯಕವಾಗಿ, ನೈಸರ್ಗಿಕವಾಗಿ, ವೈಜ್ಞಾನಿಕವಾಗಿ ಚಿಕಿತ್ಸೆಯನ್ನು ನೀಡಲಾಗುತ್ತದೆ.
ಚಿಕಿತ್ಸೆ ನಂತರ ಅನುಸರಣೆ
“ಆರೋಗ್ಯ, ವಿದ್ವತ್ತು, ಸಜ್ಜನರ ಮೈತ್ರಿ ಇವು ಹಣವಿಲ್ಲದ ಐಶ್ವರ್ಯಗಳು ಇವು ಪ್ರಾಪ್ತಿಯಾದರೆ ಹಣ ಇವುಗಳ ಹಿಂದೆ ಬರುವದು.”
ವ್ಯಸನಿಯು ವ್ಯಸನ ಮುಕ್ತ ಜೀವನ ನಡೆಸಲು ಚಿಕಿತ್ಸೆ ನಂತರ ಅನುಸರಣೆ ಅತಿಮುಖ್ಯವಾದದ್ದು. ವ್ಯಸನ ಮುಕ್ತಿ ಕೇಂದ್ರದಲ್ಲಿ ಒಂದು ತಿಂಗಳವರಗೆ ಚಿಕಿತ್ಸೆ ಪಡೆದ ನಂತರ ಅನುಸರಣೆ ಮಾಡಲಾಗುತ್ತದೆ. ಚಿಕಿತ್ಸೆ ಪಡೆದು ಬಿಡುಗಡೆಯಾದನಂತರ ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಸಮಸ್ಯೆಗಳಿಗೆ ಸಿಲುಕಿಕೊಂಡು ಮತ್ತೆ ವ್ಯಸನಿ ಆಗುವ ಸಾದ್ಯತೆಗಳಿರುತ್ತವೆ. ಇಂತಹ ಸಂದರ್ಭದಲ್ಲಿ ವ್ಯಸನಿಗಳಿಗೆ ಉತ್ತಮ ಆತ್ಮಸ್ಥೈರ್ಯ ಆಪ್ತಸಮಾಲೋಚನೆ ಹಾಗೂ ಸೂಕ್ತ ಪರಿಹಾರಗಳನ್ನು ಸೂಚಿಸುವುದು ಅತೀ ಅವಶ್ಯಕವಾಗಿದೆ. ಈ ಉದ್ದೆಶಕ್ಕಾಗಿಯೇ ಅನುಸರಣೆ ಮಾಡಲಾಗುತ್ತದೆ. ಚಿಕಿತ್ಸೆ ಪಡೆದ ನಂತರ ವ್ಯಸನಿಯು ಕೆಲವು ಔಷಧೋಪಚಾರಗಳನ್ನು ಅನುಸರಣೆ ಮಾಡಬೇಕಾಗುತ್ತದೆ. 18ತಿಂಗಳ ಕಾಲದ ವರೆಗೆ ಈ ಮಾತ್ರೆ ಸೇವಿಸಲು ತಿಳಿಸಲಾಗುತ್ತದೆ. ಪ್ರತಿ ತಿಂಗಳು ನಶಾ ಮುಕ್ತಿ ಕೇಂದ್ರಕ್ಕೆ ಬಂದು ತೆಗೆದುಕೊಂಡು ಹೊಗಲು ತಿಳಿಸಲಾಗುತ್ತದೆ. ತಪ್ಪಿದ್ದಲ್ಲಿ ಅವರಿಗೆ ಪೋನಿನ ಮುಖಾಂತರ ಸಂಪರ್ಕಿಸಲಾಗುತ್ತದೆ ಪೋನಿನ ಮೂಖಾಂತರ ಸಿಗದೇ ಇದ್ದಲ್ಲಿ ಮನೆ ಭೇಟಿ ನೀಡಿ ಸಂಪರ್ಕಿಸಲಾಗುತ್ತದೆ.