ಆತ್ಮಿಯರೆ, ನಾನು ರಾಯಚೂರು ಜಿಲ್ಲೆಯವನಾಗಿದ್ದು, ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದ್ದೇನೆ. ನಮ್ಮದು ಮಧ್ಯಮ ವರ್ಗದ ಕುಟುಂಬ ನನ್ನ ಪ್ರಾಥಮಿಕ & ಮಾಧ್ಯಮಿಕ ಶಿಕ್ಷಣ ನನ್ನ ಸ್ವಂತ ಊರಿನಲ್ಲಿ ಆಯ್ತು ನಾನು ಪ್ರತಿಭಾನ್ವಿತ ವಿಧ್ಯಾರ್ಥಿ ಆಗಿದ್ದರಿಂದ ಪದವಿ ಪೂರ್ವ & ಪದವಿ ಸ್ನಾತಕೋತ್ತರ ಪದವಿ ಧಾರವಾಡದಲ್ಲಿ ಮುಗಿಸಿದ್ದೇನೆ. ನಂತರ ಖಾಸಗಿ ಶಾಲೆಗಳಲ್ಲಿ ಅರೆಕಾಲಿಕ ಉಪನ್ಯಾಸಕನಾಗಿ ಕೆಲಸಮಾಡುತ್ತ ಸರ್ಕಾರಿ ಉಪನ್ಯಾಸ ಕೆಲಸಕ್ಕೆ ತಯಾರಿ ನಡೆಸುತ್ತಿದ್ದೆನು. ನಂತರ ದೇವರ ಕೃಪೆಯಿಂದ ಸರ್ಕಾರಿ ಉಪನ್ಯಾಸಕನಾಗಿ ನೇಮಕನಾದೆ ನಂತರ ನನ್ನ 30ನೇ ವಯಸ್ಸಿನಲ್ಲಿ ನನಗೆ ಸರ್ಕಾರಿ ನೌಕರಿ ಮಹಿಳೆಯೊಂದಿಗೆ ನನ್ನ ವಿವಾಹವಾಯಿತು.
ಹೀಗೆ ನನ್ನ ವೃತ್ತಿ, ನನ್ನ ಸಂಸಾರ ಸುಖಕರವಾಗಿ ಸಾಗುತಿತ್ತು. ಸ್ನೆಹಿತರ ಸಹವಾಸದಿಂದ ಮೋಜು ಮಸ್ತಿಗಾಗಿ ಮಧ್ಯಪಾನ ಸೇವಿಸಲು ಪ್ರಾರಂಭಿಸಿ ಅದು ವಿಪರಿತ ಹಂತಕ್ಕೆ ತಲುಪಿತು. ಈ ಚಟದಿಂದ ನನ್ನ ಜೀವನಕ್ಕೆ ಭರಸಿಡಿಲು ಬಡದಂತಾಯಿತು. ಇದರಿಂದ ನನ್ನ ವೃತ್ತಿ, ನನ್ನ ಸಂಸಾರ, ನನ್ನ ಆರೋಗ್ಯ ಹಾಳಾಗಿ ಸಮಾಜದಲ್ಲಿ ಗೌರವ ಇಲ್ಲದಂತೆ ಕಾಣತೊಡಗಿತು.
ಈ ಅವಸ್ಥೆಯನ್ನು ಮನಗಂಡು ನನ್ನ ತಂದೆಯವರು ವ್ಯಸನಮುಕ್ತರನ್ನಾಗಿಸಲು. ಸುರಭೀ ವ್ಯಸನಮುಕ್ತ ಕೇಂದ್ರಕ್ಕೆ ದಾಖಲಿಸಿದರು ಈ ಕೆಂದ್ರದಲ್ಲಿ ನೀಡುವ ಯೋಗಾಭ್ಯಾಸ, ಧ್ಯಾನ, ಮೂಲ ಶಿಕ್ಷಣ ಆಪ್ತಸಮಾಲೋಚನೆ, ಜೀವನ ಶೈಲಿಯ ತಂತ್ರಗಾರಿಕೆಯ ಮೂಲಕ ಮನಸ್ಸನ್ನು ಗಟ್ಟಿಕೊಳಿಸಿ, ನನ್ನ ದುರ್ಬಲ ಮನಸ್ಸನ್ನು ಸದೃಢಗೊಳಿಸಿ ನನ್ನನ್ನು ಸಮಾಜದಲ್ಲಿ ಗೌರವಯುತ ಉಪನ್ಯಾಸಕರನ್ನಾಗಿ ಮಾಡಲು ಸಹಕರಿಸಿ ತರಬೇತಿ ನೀಡಿದ ಸುರಭೀ ವ್ಯಸನ ಮುಕ್ತ ಕೇಂದ್ರಕ್ಕೆ ಹಾಗೂ ಸಿಬ್ಬಂದಿ ವರ್ಗಕ್ಕೆ ನಾನು ಚೀರರುಣಿ ನಾನು ಇಗ ಮಧ್ಯಪಾನ ತ್ಯಜಿಸಿ 3 ವರ್ಷ ವ್ಯಸನ ಮುಕ್ತ ಜೀವನ ನಡೆಸುತ್ತಿದ್ದೆನೆ. ಈ ನನ್ನ ಹರಿದು ಹಂಚಿಹೊಗಿದ್ದ ನನ್ನ ಜೀವನಕ್ಕೆ ಒಂದುಗೂಡಿಸಿ ರೂಪಕೊಟ್ಟ ಸುರಭಿ ಸಂಸ್ಥೆಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ನನ್ನ ಅನಂತ ನಮನಗಳು.
ಆತ್ಮಿಯರೆ, ನಾನು ಕೊಪ್ಪಳ ಜಿಲ್ಲೆಯ ಪ್ರಸಿದ್ದ ರೈತ ಕುಟುಂಬದಲ್ಲಿ ಜನಿಸಿದೆ. ನಮ್ಮದು ಮಧ್ಯಮ ವರ್ಗದ ಕುಟುಂಬವಾಗಿದ್ದು ನನ್ನ ಬಾಲ್ಯ ಜೀವನ ಮತ್ತು ಪ್ರಾಥಮಿಕ ಶಿಕ್ಷಣ ನನ್ನ ಸ್ವಂತ ಗ್ರಾಮದಲ್ಲಿ ಮುಗಿಸಿ ನಂತರ 10ನೇ ತರಗತಿಯವರಿಗೆ ಫ್ರೌಢ ಶಿಕ್ಷಣವನ್ನು ಯಲಬುರ್ಗಾದಲ್ಲಿ ಮುಗಿಸಿದ್ದೆ. ನನ್ನ ಬಾಲ್ಯ ಜೀವನ ಸುಖಕರವಾಗಿತ್ತು. ನಾನೂ ಕೂಲಿ ಕೆಲಸ ಮಾಡುತ್ತಾ ಸರಕಾರಿ ಉದ್ಯೋಗ ಹುಡುಕುತ್ತಿದ್ದೆ. ಕೊನೆಗೆ ದೇವರ ಕೃಪೆಯಿಂದ ನನಗೆ ತೋಟಗಾರಿಕೆ ಇಲಾಖೆಯಲ್ಲಿ ಸಿಪಾಯಿ ಕೆಲಸ ದೊರೆಯಿತು. ನಂತರ 27ನೇ ವಯಸ್ಸಿನಲ್ಲಿ ನನಗೆ ಮದುವೆಯಾಯಿತು. ನಾನು ಸರಕಾರಿ ಕೇಲಸ ಮಾಡುತ್ತಿರುವುದರಿಂದ ಸಂಬಳ ತಿಂಗಳು ಮುಗಿಯುವುದರೊಳಗೆ ದೊರೆಯುತ್ತಿರುವುದರಿಂದ ಹಣಕಾಸಿನ ತೊಂದರೆ ಆಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ಹಲವು ಸ್ನೇಹಿತರು ಪರಿಚಿತರಾಗಿ ನನಗೆ ಅವರು ಮಧ್ಯಪಾನ ಮಾಡುವ ಅಭ್ಯಾಸ ಬೆಳೆಸಿದರು. ಅದು ವಿಧಿ ಬದಲಾದಂತೆ ವಿಪರಿತ ಚಟದ ಹಂತಕ್ಕೆ ತಲುಪಿತು ಇದರಿಂದ ನನ್ನ ಸಂಸಾರದಲ್ಲಿ ನೆಮ್ಮದಿ ಹಾಳಾಗಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಕೆಲಸಕ್ಕೆ ಹೋಗಲಾರದೆ ಕುಡಿದು ಕುಡಿದು ಅಲೆದಾಡತೊಡಗಿದೆ. ಇದರಿಂದ ನನ್ನ ಮುಖ್ಯಸ್ಥರು ಕರೆಸಿ ನನ್ನ ಮಧ್ಯಪಾನ ಬಿಡಿಸಲು ಸುರಭೀ ವ್ಯಸನ ಮುಕ್ತಿ ಕೇಂದ್ರಕ್ಕೆ ದಾಖಲಾಗಲು ತಿಳಿಸಿದರು.
ಇಲ್ಲಿ ನಾನು ದಾಖಲಾಗಿ 1 ತಿಂಗಳು ಕಾಲ ಚಿಕಿತ್ಸೆ ಪಡೆದಿದ್ದೇನೆ. ಅಲ್ಲಿ ನನಗೆ ಆರೋಗ್ಯದ ಬಗ್ಗೆ, ಹಣಕಾಸಿನ ಬಗ್ಗೆ, ವ್ಯವಹಾರದ ಬಗ್ಗೆ, ಮಧ್ಯಪಾನ ದುಷ್ಪರಿಣಾಮದ ಬಗ್ಗೆ ತಿಳುವಳಿಕೆ ನೀಡಿದ್ದರಿಂದ ನಾನು ಬದಲಾದೆ. ಈಗ ವ್ಯಸನ ಮುಕ್ತನಾಗಿ ಜೀವನ ನಡೆಸುತ್ತಿದ್ದೆನೆಂದು ನನ್ನ ಇಲಾಖೆ ಮುಖ್ಯಸ್ಥರಿಂದ ಮೇಚ್ಚುಗೆ ಪಡೆದು ಉತ್ತಮ ನೌಕರನಾಗಿ ಬಡ್ತಿಯನ್ನು ಪಡೆದಿದ್ದೇನೆ. ಈಗ ನಾನು ಮಧ್ಯವ್ಯಸನ ಬಿಟ್ಟು 2 ವರ್ಷ ವಾಯಿತು. ಇದೇರಿತಿ ವ್ಯಸನಕ್ಕೆ ದಾಸರಾದವರಿಗೆ ಕರೆತಂದು ಚಿಕಿತ್ಸೆಗೆ ದಾಖಲಿಸುತ್ತೀದ್ದೆನೆ. ಒಟ್ಟಾರೆಯಾಗಿ ಹಳಿ ತಪ್ಪಿದ ನನ್ನ ಜೀವನಕ್ಕೆ ಒಳ್ಳೆಯ ರೂಪ ಕೊಟ್ಟ ಸುರಭೀ ವ್ಯಸನ ಮುಕ್ತಿ ಕೇಂದ್ರ ಮತ್ತು ಸಿಬ್ಬಂಧಿ ವರ್ಗದವರಿಗೆ ತುಂಬು ಹೃದಯದ ಅಭಿನಂದನೆಗಳು ತಿಳಿಸುತ್ತೇನೆ.