ವ್ಯಸನ
“ಸಿಂದಿಯ ಸೇವಿಪನು ಹಂದಿಯಂತಿರುವನು ಹಂದಿಯೊಂದಡೆಗೆ ಉಪಕಾರಿ ಕುಡುಕನು ಹಂದಿಗೂ ಕಷ್ಟ ಸರ್ವಜ್ಞ”
“ಹಾಡುತ್ತ ಹಾಡುತ್ತ ರಾಗ ಚಟ ಮಾಡುತ್ತ ಮಾಡುತ್ತ ರೋಗ” ಎಂಬಂತೆ ಮೊದಮೊದಲು ಇಂದಿನ ಯುವಜನತೆ ಮದ್ಯವನ್ನು ಕುತುಹಲಕ್ಕಾಗಿ ಸೇವಿಸಲಾರಂಬಿಸುತ್ತಾರೆ. ಮತ್ತು ತಮ್ಮೊಳಗಿನ ಒತ್ತಡವನ್ನು ಕಡಿಮೆಮಾಡಲು ಸ್ನೇಹಿತರ ಒತ್ತಾಯಕ್ಕೆ ಶೈಕ್ಷಣಿಕ ಮತ್ತು ಕ್ರೀಡೆಯಲ್ಲಿ ಸಾಧನೆ ಮಾಡಲು ಹಾಗೂ ಅವರಲ್ಲಿರುವ ಒತ್ತಡ ಹಾಗೂ ಸಮಸ್ಯೆಗಳನ್ನು ಮರೆಯಲೆಂದು ಮಾದಕ ವಸ್ತುಗಳನ್ನು ಸೇವಿಸಲು ಪ್ರ್ರಾರಂಬಿಸುತ್ತಾರೆ. ಕ್ರಮೇಣ ಡ್ರಗ್ಸ್‍ಗಳ ಬಳಕೆಯಿಂದ ಮೆದುಳಿನಲ್ಲಿ ಬದಲಾವಣೆ ಉಂಟಾಗಿ ವ್ಯಕ್ತಿಗಳು ಮಾದಕ ವಸ್ತುಗಳನ್ನ ಹೆಚ್ಚು ಬಳಸುವಂತೆ ಮಾಡುತ್ತದೆ ಅಂತವರು ಅದರ ಸೇವನೆಯನ್ನು ಮಾಡಲಾಗದೆ ಹೊಗುತ್ತಾರೆ ವ್ಯಕ್ತಿಗಳು ಅವರ ಮನೋಸಾಮಥ್ರ್ಯವನ್ನು ಕಳೆದುಕೊಳ್ಳುತ್ತಾರೆ ಈ ಚಟದಿಂದ ಹೊರಬರಬೇಕೆಂದು ನಿಜವಾಗಿ ಬಯಸಿದರು ಅದು ಸಾದ್ಯವಾಗದೆ ಮತ್ತೆ ಮತ್ತೆ ಅದರೆಡೆಗೆ ದುಂಬಿತರ ಆಕರ್ಷಿತರಾಗುತ್ತಾರೆ, ದುರ್ಬಲ ವ್ಯಕ್ತಿತ್ವ ಕಡಿಮೆ ಮನೋಸಾಮಥ್ರ್ಯ ಇದ್ದವರು ಮದ್ಯವ್ಯಸನಿ ಮತ್ತು ಮಾದಕ ದ್ರವ್ಯ ವ್ಯಸನಿಗಳಾಗುತ್ತಾರೆ.
ವ್ಯಸನಿಗಳು ವ್ಯಸನಿಗಳಾಗಲು ವಂಶವಾಯಿ ಸುತ್ತಲಿನ ಪರಿಸರ ಕಾರಣವಾಗಬಹುದು ಜೊತೆಗೆ ಇದು ವ್ಯಕ್ತಿಗತ ಆಯ್ಕೆಯು ಆಗಬಹುದು ಇದರಿಂದ ವ್ಯಸನಿಗಳು ಸಂಪೂರ್ಣವಾಗಿ ಹೊರಗೆ ಬರಲು ಚಿಕಿತ್ಸೆ ಮತ್ತು ಸಹಕಾರ ಬೇಕಾಗಿರುತ್ತದೆ. ಧೂಮಪಾನ, ಗಾಂಜಾ, ಕೋಖೆನ್, ಹೇರೋಯಿನ್, ಇಂಜಕ್ಷನ್ ಚುಚ್ಚಿಕೊಳ್ಳುವದು, ಕುಡಿಯುವದು ಮುಂತಾದ ರೀತಿಯಲ್ಲಿ ಮಾದಕ ದ್ರವ್ಯಗಳನ್ನ ಬಳಸಲಾಗುತ್ತದೆ.
ಮಾದಕ ವಸ್ತುಗಳ ಸೇವನೆಯಿಂದ ಮನುಷ್ಯನ ಮೆದುಳಿನ ನರಗಳಲ್ಲಿ ಡೊಪೊಮೈನ್ ಎನ್ನುವ ಸಂವಕ ಬಿಡುಗಡೆಯಾಗುತ್ತದೆ ಯಾವಾಗ ವ್ಯಕ್ತಿ ಮಾದಕ ದ್ರವ್ಯಗಳನ್ನು ಬಳಸುತ್ತಾರೊ ಆಗ ಮೆದುಳಿನ ಸಂದೇಶದ ವ್ಯವಸ್ಥೆಯು ಪುನರಾವರ್ತನೆ ಯಾಗುತ್ತದೆ ಆಗ ಡೂಪೊಮೈನ್ ಬಿಡುಗಡೆಯಾಗಿ ವ್ಯಕ್ತಿಯ ಮೆದುಳಿನಲ್ಲಿ ಸಂತೋಸ ಉಂಟಾಗುತ್ತದೆ. ಮಾದಕ ವಸ್ತುಗಳನ್ನು ಕ್ರಮೇಣವಾಗಿ ಸೇವಿಸಿದರೆ ಮೆದುಳಿನ ಸೂಕ್ಷ್ಮತೆ ಕಡಿಮೆಯಾಗುತ್ತದೆ ಈ ರೀತಿ ನಿರಂತರವಾಗಿ ಸೇವಿಸುವುದರಿಂದ ಮೊದಲು ಸಿಗುತ್ತಿದ್ದ ಸಂತೋಷದ ಅನುಭವ ಸಿಗುತ್ತದೆ ಎಂಬ ಭ್ರಮೆಗೆ ಸಿಲುಕುತ್ತಾರೆ ವ್ಯಸನದಿಂದ ಮೆದುಳಿನ ಆಲೋಚನಾ ಕ್ರಮದಲ್ಲಿ ಗೊಂದಲ ಉಂಟಾಗುತ್ತದೆ. ನಿರಂತರ ಮಾದಕವಸ್ತು ಸೇವನೆಯು ಮೆದುಳಿನ ಕಾರ್ಯಕ್ಷೇಮತೆಯನ್ನು ಕಡಿಮೆ ಮಾಡುತ್ತದೆ. ಹೂಗಳ ವಾಸನೆ ಗಾಳಿ ಬೀಸುವ ದಿಕ್ಕಿನೆಡೆ ಸಾಗುವದು ಕ್ರಿಯಾಶೀಲ ವ್ಯಕ್ತಿಯ ಕೀರ್ತಿ ಗಾಳಿಯ ವಿರುದ್ಧ ದಿಕ್ಕಿಗೂಸಾಗುವದು.