ಬೆಂಬಲಿತ ಕಾರ್ಯಕ್ರಮಗಳು

ಬೆಂಬಲಿತ ಕಾರ್ಯಕ್ರಮಗಳು

“ಭೂಮಿಯೊಳಗೆ ಬೀಜ ಬಿದ್ದಲ್ಲಿ ಕೆಟ್ಟತೆನಬೇಡ ಮುಂದಣ ಫಲದೊಳರಗಿಸಿಕೋ ಕಾಸಿಕರಗಿದ ಬಂಗಾರ ಕಟ್ಟತೆನ್ನಬೇಡ; ಮುಂದಣ ಬಣ್ಣದೊರಳಗಿಸಿಕೋ ಹೊತ್ತಿಸಿದ ದೀಪ ಕೆಟ್ಟತೆನಬೇಡ ಅಗ್ನಿಯೋಳ್ ಅರಸಿಕೋ.”

ಯಾವುದೇ ಒಂದು ಕಾರ್ಯವು ಯಶಸ್ವಿಯಾಗಬೇಕಾದರೆ ಬೆಂಬಲವು ಅತಿ ಅವಶ್ಯಕವಾಗಿದೆ. ಅಂತೆಯೇ ಪ್ರತಿಯೊಂದು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಯಶಸ್ವಿಯಾಗಬೇಕಾದರೆ ಪ್ರೋತ್ಸಾಹ ಕಾರ್ಯಕ್ರಮಗಳ ಪಾತ್ರ ಮಹತ್ವದಾಗಿರುತ್ತದೆ. ಅದೆರೀತಿ ವ್ಯಸನಮುಕ್ತಿ ಕೇಂದ್ರಗಳಲ್ಲಿ ಹಲವು ಪ್ರೋತ್ಸಾಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

  1. ಮಧ್ಯವ್ಯಸನ ಮುಕ್ತರು, ಮಂಗಳಮುಖಿಯರು, ಲೈಂಗಿಕ ವೃತ್ತಿನಿರತ ಕಾರ್ಯಕರ್ತೆಯರು. ಮಾದಕ ವಸ್ತುಗಳ ಸೇವೆನೆಯಿಂದ ಮುಕ್ತರಾದವರಿಂದ ತಂಡಗಳನ್ನು ರಚಿಸಿ ಅವರುಗಳ ಮೂಲಕ ಜಾಗೃತ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
  2. ಸ್ನಾತಕ/ಸ್ನಾತಕೋತರ ಸಮಾಜಕಾರ್ಯ ವಿದ್ಯಾರ್ಥಿಗಳಿಂದ ಸಮುದಾಯದಲ್ಲಿ ವ್ಯಸನಿಗಳಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದು.
  3. ವಿವಿದ ಸರ್ಕಾರೇತರ, ಗ್ರಾಮೀಣಾಭಿವೃದ್ಧಿ, ಸ್ವಸಹಾಯ ಗುಂಪುಗಳು ಮುಂತಾದ ಸಂಘ ಸಂಸ್ಥೆಗಳ ಮೂಲಕ ವ್ಯಸನ ಮುಕ್ತರಿಗೆ ಸ್ವಯಂ ಉದ್ಯೋಗ ತರಬೇತಿಗಳನ್ನು ಹಮ್ಮಿಕೊಳ್ಳುವುದು.
  4. ಸರ್ಕಾರದ ವಿವಿಧ ಇಲಾಖೆಗಳ ಮೂಲಕ ವ್ಯಸನಿಗಳಿಗೆ ಆರೋಗ್ಯ, ವೃತ್ತಿ ಮತ್ತು ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಕಾರ್ಯಕ್ರಮ ಏರ್ಪಡಿಸುವುದು.
ತರಬೇತಿಗಳು

“ಮನಸ್ಸು ಮಾನಸಿಕ ಸ್ಥಿತಿಗಳ ಮೂಲ ಮನಸ್ಸೇ ಅವುಗಳ ಮುಂದಾಳು ಮನಸ್ಸಿನಿಂದಲೇ ಅವುಗಳ ನಿರ್ಮಿಸಿ, ಮನಸ್ಸಿನಿಂದ ಮಾತನಾಡಿದರೆ ಏಂದಿಗೂ ಬಿಡದ ನೆರಳು ಹಿಂಬಾಲಿಸುವ ಹಾಗೆ ಸುಖವು ಆತನನ್ನು ಹಿಂಬಾಲಿಸುತ್ತದೆ.”

ಒಬ್ಬ ವ್ಯಕ್ತಿಯು ಒಂದು ವೃತ್ತಿಯನ್ನು ಯಶಸ್ವಿಗಾಗಿ ನಿಭಾಯಿಸ ಬೇಕಾದರೆ ತರಬೇತಿ ಅತೀ ಅವಶ್ಯಕವಾಗಿದೆ. ತರಬೇತಿಯನ್ನುವುದು ಒಂದು ಸೇವಾ ನಿಕಟಪೂರ್ವವಾಗಿದೆ. ಇದು ಮಾನವ ಸಂಪನ್ಮೂಲ ಪರಿಕಲ್ಪನೆಯಲ್ಲಿ ಒಂದು ವಿಶಿಷ್ಟ ಯೋಜನೆಯಾಗಿದೆ. ಅಭ್ಯರ್ಥಿಗಳಿಗೆ ನಿರ್ದಿಷ್ಟ ಕೌಶಲ್ಯ, ಸಾಮಥ್ರ್ಯ, ವ್ಯಕ್ತಿತ್ವ ನಿರ್ಮಾಣ, ಜವಬ್ದಾರಿ ಮುಂತಾದ ಅಂಶಗಳನ್ನು ವ್ಯಕ್ತಿಯಲ್ಲಿ ಹೆಚ್ಚಿಸಿ ಪರಿಣಾಮಕಾರಿಯಾಗಿ ನಿರ್ಭಿತಿಯಿಂದ ಕೆಲಸಮಾಡಲು ಸಹಾಯಕವಾದ ತಂತ್ರವಾಗಿದೆ. ಇದು ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸಿ ಕೌಶಲ್ಯಯುತವಾಗಿ ಕೆಲಸ ಮಾಡಲು ಸಹಾಯಕವಾದ ಸಂಘಟಿತ ಕಾರ್ಯಕ್ರಮವಾಗಿದೆ ಹಾಗೂ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೃದ್ಧಿಸುವ ಪ್ರಕ್ರಿಯೆಯಾಗಿದೆ. ಅದರಂತೆ ಕೆಲವು ತರಬೇತಿಗಳನ್ನು ವ್ಯಸನ ಮುಕ್ತಿ ಕೇಂದ್ರದಲ್ಲಿ ನೀಡಲಾಗುತ್ತದೆ.

“ವಿಷಯವನ್ನು ತಲೆಗೆ ತುರುಕದೆ ಮನಸ್ಸಿಗೆ ತರಬೇತಿ ನೀಡುವ ಲಕ್ಷಾಂತರ ಜನರ ಸೇವೆ ಭಾರತಕ್ಕೆ ಅವಶ್ಯವಾಗಿದೆ.”

  1. ಮಾನವ ಹಕ್ಕುಗಳ ಪರಿಕಲ್ಪನೆ ತರಬೇತಿ.
  2. ಒತ್ತಡ ನಿರ್ವಹಣೆ ತರಬೇತಿ.
  3. ಆರೋಗ್ಯ ಶುಚಿತ್ವದ ಬಗ್ಗೆ ತರಬೇತಿ.
  4. ಹಣಕಾಸು ನಿರ್ವಹಣೆ ತರಬೇತಿ.
  5. ಸಂಭಂದಗಳ ಮರು ಜೊಡಣೆ ತರಬೇತಿ.
  6. ಮಾನವೀಯ ಮೌಲ್ಯಗಳ ತರಬೇತಿ.
  7. ವೃತ್ತಿಪರ ಕೌಶಲ್ಯಗಳ ತರಬೇತಿ.
  8. ವ್ಯಕ್ತಿತ್ವ ನಿರ್ಮಾಣಗೊಂಡ ತರಬೇತಿ.
  9. ಮರುಕಳಿಕೆ ತಡೆಗಟ್ಟುವ ತರಬೇತಿ.
  10. ಮಹಾನ ವ್ಯಕ್ತಿಗಳ ಆದರ್ಶ ತತ್ವಗಳ ತರಬೇತಿ. (ಉದಾ: ಗಾಂಧಿಜಿಯವರ ವಿಚಾರಧಾರೆಗಳು)