“ಹೊಟ್ಟೆಯ ಹಸಿವನ್ನು ಇಂಗಿಸಲಿಕ್ಕೆಂದು ಊಟಹಾಕಿದರೆ ಅದೊಂದು ತಾತ್ಕಾಲಿಕ ಪರಿಹಾರ, ಅದೇಯಾರಾದರೊಬ್ಬರು ಮಿದುಳಿನ ಹಸಿವೆಯನ್ನು ಇಂಗಿಸಲೆಂದು ಜ್ಞಾನಾರ್ಜನೆ ಮಾಡಿದರೆ ಅದೊಂದು ಶಾಶ್ವತ ಪರಿಹಾರ.”
ವೈಯಕ್ತಿಕ ಆಪ್ತಸಮಾಲೋಚನೆಯು ವ್ಯಕ್ತಿಯ ತಕ್ಷಣ ಅಥವಾ ಭವಿಷ್ಯತ್ತಿನ ಬಗ್ಗೆ ಕಾಳಜಿವಹಿಸುವ ವಿಷಯವಾಗಿದೆ ವೈಯಕ್ತಿಕ ಆಪ್ತಸಮಾಲೋಚನೆಯು ಇದು ವೃತ್ತಿ ಸಮಾಲೋಚನೆ ಮತ್ತು ಯೋಜನೆಯನ್ನು ಒಳಗೊಂಡಿದೆ ಇದು ವ್ಯಕ್ತಿಯ ಅತಿಯಾದ ಪ್ರೀತಿ ಪಾತ್ರರು ಮರಣ ಹೊಂದಿದಾಗ ಉನ್ನತ ಉದ್ಯೋಗದಲ್ಲಿ ಉಂಟಾಗುವ ಸಮಸ್ಯೆಗಳನ್ನು ನಿಭಾಹಿಸಲು ಸಲಹೆಗಾರನಂತೆ ಕೆಲಸಮಾಡಲು ಸಹಾಯಕವಾಗಿದೆ.ಮತ್ತು ಪರಸ್ಪರ ಪ್ರೀತಿ ವಿಶ್ವಾಸಕ್ಕೆ ಸಹಾಯಕವಾಗಿದೆ ವ್ಯಸನಿಗಳಲ್ಲಿ ಪರಸ್ಪರ ಸಂಬಂಧವನ್ನು ರೂಪಿಸಲು ಸಹಾಯಕವಾಗಿದೆ. ಇದು ವೈಯಕ್ತಿಕ ಬೆಳವಣಿಗೆ ವಿಶ್ವಾಸವನ್ನು ಗಟ್ಟಿಗೊಳಿಸುವ ವ್ಯಕ್ತಿ ತನ್ನನ್ನು ತಾನು ಅರಿತುಕೊಳ್ಳಲು ಸಹಾಯಕವಾಗುವ ಒಂದು ವಿಶಿಷ್ಟ ತಂತ್ರವಾಗಿದೆ. ವೈಯಕ್ತಿಕ ಆಪ್ತಸಮಾಲೋಚನೆಯು ಸಂವಹನ, ಸ್ವೀಕಾರ, ಭಾಗವಹಿಸುವಿಕೆ, ಗೌಪ್ಯತೆ, ಅಂತ್ಯಗೊಳಿಸುವಿಕೆ ತತ್ವದ ಆಧಾರದ ಮೇಲೆ ನಡೆಯುತ್ತದೆ.