“ಆಡು ಮುಟ್ಟದ ಸೊಪ್ಪಿಲ್ಲ, ವ್ಯಸನಕ್ಕೆ ದಾಸನಾಗದ ವ್ಯಕ್ತಿಇಲ”್ಲ ಎಂಬ ನಾಣ್ಣುಡಿಯಂತೆ ಜಗತ್ತಿನಾದ್ಯಂತ ಹರಡಿದ ಸಾಮಾಜಿಕ ಸಮಸ್ಯೆಗಳಲ್ಲಿ ಮಧ್ಯಪಾನ ಮತ್ತು ಮಾದಕವಸ್ತುಗಳ ಸೇವನೆಯು ಒಂದಾಗಿದೆ. ಭಾರತ ದೇಶವು ಸಾಂಪ್ರದಾಯಕ ಹಾಗೂ ಸಾಂಸ್ಕøತಿಕ ಬದ್ದ ರಾಷ್ಟ್ರವಾಗಿದೆ. ಅದರಂತೆ ನಮ್ಮ ದೇಶದ ನೈಸರ್ಗಿಕ ವಾತವರಣವು ಸಹ ಉಷ್ಣವಲಯದ ಮಾನ್ಸೂನ್ ಮಾರುತವನ್ನು ಹೊಂದಿರುವುದರಿಂದ ವ್ಯಸನಕ್ಕೆ ದಾಸನಾಗುವಂತೆ ಮಾಡಿದೆ. ಮಧ್ಯಪಾನ ಹಾಗೂ ಮಾದಕ ಸೇವನೆ ಅದು ಇಂದು ನಿನ್ನೆಯದಲ್ಲ ಮಧ್ಯದ ಇತಿಹಾಸ ಬಹಳ ಪ್ರಾಚೀನವಾದದ್ದು. ಪುರಾಣ ಕಾವ್ಯಗಳಲ್ಲಿ ಇದರ ಪ್ರಸ್ತಾಪವಿದೆ.ಋಗ್ವೇದದಲ್ಲಿ ಸೋಮದೇವತೆಗೆ 120 ಸೂತ್ರಗಳಿವೆ ದೇವತೆಗಳ ಅಮರತ್ವಕ್ಕೆ ಸೋಮದೇವತೆ ಕಾರಣ ಎಂದು ಭಾವಿಸಲಾಗಿತ್ತು. ಅಮೃತ ಪಾನದಿಂದ ದೇವತೆಗಳು ಅಮರರಾದರು. ಆದರೇ ಭೂಲೋಕದಲ್ಲಿ ಜನರು ಮದ್ಯವನ್ನು ಕುಡಿದು ಆರೋಗ್ಯ ಸಂಸಾರವನ್ನು ಹಾಳು ಮಾಡಿಕೊಂಡರು ದೇವೇಂದ್ರನ ಸ್ವರ್ಗದಲ್ಲಿ ಸುರಪಾನ ಮಾಡುವುದು ಇತ್ತು ಎಂದು ಪುರಾಣಗಳು ಸಾರುತ್ತವೆ. ಪಾರ್ಸಿಧರ್ಮದ ಪವಿತ್ರ ಗ್ರಂಥದಲ್ಲೂ ಮದ್ಯ ತಯಾರಿಸುವುದಕ್ಕೆ ಸಂಬಂದಿಸಿದ ವಿವರಗಳು ದೊರೆಯುತ್ತವೆ. ಇತಿಹಾಸ ಪ್ರಸಿದ್ದ ರಾಜ ಮಹರಾಜರು ಯುದ್ದದ ವಿಜಯೋತ್ಸವ ಧಾರ್ಮಿಕ ಆಚರಣೆ ಮುಂತಾದ ಸಂತೋಷ ಕೂಟಗಳಲ್ಲಿ ದ್ರಾಕ್ಷೀಹಣ್ಣಿನಿಂದ ತಯಾರಿಸಿದ ರಸವನ್ನು ಕುಡಿದು ಆನಂದಿಸುತಿದ್ದರು ಮದುವೆ, ದೇವತಾ ಆರಾಧನೆ, ಶಾಂತಿ ಸಮಾರಂಭ ಶವ ಸಂಸ್ಕಾರಗಳಲ್ಲಿ ಮದ್ಯಪಾನ ಬಳಕೆ ಇತ್ತು. ಪ್ರಾಚೀನ ಕಾಲದಿಂದಲು ಮದ್ಯ ತಯಾರಿಕೆಯ ಮಾರಾಟವಿತ್ತು. ಸರ್ಕಾರ ಕಾನೂನುಬದ್ದಗೊಳಿಸಿರುವ ಕ್ರಿ.ಪೂ. 1770 ರಲ್ಲಿ ಮದ್ಯಪಾನ ಗೃಹಗಳನ್ನು ಕಾನೂನು ಬದ್ಧಗೊಳಿಸಲಾಯಿತು. ಮುಂದೆ ಅದು ಪಾಶ್ಚಿಮಾತ್ಯರ ಆಳ್ವಿಕೆಯಿಂದ ಭಾರತದಲ್ಲಿ ಉತ್ತಮವಾದ ರೀತಿಯಲ್ಲಿ ಮಾದಕವಸ್ತುಗಳು ಹಾಗೂ ಮದ್ಯಪಾನ ಭಾರತೀಯರಿಗೆ ಪರಿಚಯವಾಯಿತು. ಇದರಿಂದ ಭಾರತೀಯರು ತಮ್ಮ ಸಂಪ್ರದಾಯಕ ಮದ್ಯಪಾನವನ್ನು ಬಿಟ್ಟು ಪಾಶ್ಚಾತ್ಯರು ಪರಿಚಯಿಸಿದ ಮದ್ಯಪಾನಕ್ಕೆ ಅಂಟಿಕೊಂಡರು ಕ್ರಮೇಣ ಭಾರತೀಯರು ಪಾಶ್ಚಾತ್ಯರ ವ್ಯಸನದ ಸಂಸ್ಕøತಿಗೆ ದಾಸರಾದರು. ಸಂತೋಷಕೂಟದ ಸಂದರ್ಭದಲ್ಲಿ ಸೇವಿಸುವ ಮದ್ಯಪಾನ ಇಂದು ಆಧುನಿಕ ಪ್ಯಾಶನ್ ಆಗಿ ಪರಿವರ್ತನೆಗೊಂಡಿದೆ.
ಸ್ವಾತಂತ್ರೋತ್ತರ ಭಾರತದಲ್ಲಿ ಹೊಸ ಆರ್ಥಿಕ ನೀತಿಗಳಾದ ಉದಾರೀಕರಣ, ಜಾಗತೀಕರಣ, ನಗರೀಕರಣದಿಂದಾಗಿ ಗ್ರಾಮೀಣ ಮತ್ತು ನಗರ ಸಂಪ್ರದಾಯ ಸಂಸ್ಕøತಿ ಬದಲಾವಣೆಯಾಗತೊಡಗಿದವು ಕೂಡು ಕುಟುಂಬಗಳು ಇಂದು ಒಂಟಿ ಕುಟುಂಬಗಳಾಗಿ ಸಂಪ್ರದಾಯಬದ್ದವಾಗಿ ಆಚರಿಸಲ್ಪಡುತ್ತಿದ್ದ ಹಬ್ಬಹರಿದಿನಗಳು ಇಂದು ಪಾಶ್ಚಿಮಾತ್ಯರ ಪ್ರಭಾವಕ್ಕೆ ಒಳಗಾಗಿ ಆ ಹಬ್ಬಗಳು ಇಂದು ಮದ್ಯಪಾನ ಮತ್ತು ಮಾದಕವಸ್ತುಗಳ ಮೂಲಕ ಆಚರಣೆಗೆ ಬಂದುನಿಂತಿದೆ. ಪ್ರಸ್ತುತ 4ಜಿ ತಂತ್ರಜ್ಞಾನ ಯುಗದಲ್ಲಿ ಸಂತೋಷಕೂಟದಲ್ಲಿ ಮಾತ್ರ ಸೇವಿಸುತಿದ್ದ ಮಧ್ಯಪಾನ ಮತ್ತು ಮಾದಕವಸ್ತುಗಳ ಸೇವನೆಯು ಇಂದು ವ್ಯಸನವಾಗಿ ಮಾರ್ಪಟ್ಟು ತಂತ್ರಜ್ಞಾನ ಯುಗದಲ್ಲಿ ಮಾದಕವಸ್ತುಗಳ ಹಾಗೂ ಮಧ್ಯಪಾನ ಸೇವನೆಯು ಸಮಾಜಕ್ಕೆ ಎಷ್ಟು ದೊಡ್ಡ ಪಿಡುಗಾಗಿದೆಯೋ ಅಷ್ಟೇ ಆರೋಗ್ಯಕ್ಕೆ ಹಾನಿಕಾರಕ ಹಾಗೂ ಬಹುದೊಡ್ಡ ಆಧುನಿಕ ಕಾಲದ ಸಾಮಾಜೀಕ ಪಿಡುಗಾಗಿ ನಿದ್ದೆಗೆಡಿಸಿದೆ.
ತಂತ್ರಜ್ಞಾನ ಯುಗದಲ್ಲಿ ಮಧ್ಯಪಾನ ಸೇವನೆಯಿಂದಾಗುವ ಅಹಿತಕರ ಘಟನೆಗಳು ಇಡೀ ಸಮಾಜಕ್ಕೆ ಕುಂದುಂಟು ಮಾಡುತ್ತವೆ. ವ್ಯಸನಿಯು ಸಾಮಾಜಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ ಬಳಲುವುದರ ಜೊತೆಗೆ ಆತನ ಆರೋಗ್ಯ ಸ್ಥಿತಿ ಗಂಭಿರವಾಗಿ ವ್ಯಕ್ತಿತ್ವ ನಾಶವಾಗುತ್ತದೆ. ಜೊತೆಗೆ ಕೌಟುಂಬಿಕಕಲಹ, ಉದ್ಯೋಗನಷ್ಟ, ಪ್ರಾಣಹಾನಿ ಸೇರಿದಂತೆ ಅನೇಕ ಸಮಸ್ಯೆಗಳನ್ನು ವ್ಯಸನಿಯು ಎದುರಿಸಬೇಕಾಗುತ್ತದೆ. ಇಂತಹ ಘೋರ ಸಮಸ್ಯೆಗಳ ಬಗ್ಗೆ ನಾವೇಲ್ಲರೂ ಎಚ್ಚೆತ್ತುಕೊಳ್ಳಬೇಕಾಗಿದೆ. ಇಂತಹ ಸಾಮಾಜಿಕ ಸಮಸ್ಯೆಗೆ ಪರಿಹಾರ ಎಂದರೇ ವ್ಯಸನಮುಕ್ತ ಸಧೃಡ ಸಮಾಜ ನಿರ್ಮಾಣ ಮಾಡುವದು. ಇಂತಹ ಮೂಲವನ್ನು ಮನಗಂಡು ಭಾರತ ಸರ್ಕಾರವು ವ್ಯಸನಿಗಳ ಸಮಗ್ರ ಪುನರ್ವಸತಿ ಕೇಂದ್ರಗಳನ್ನು ಸಂಘಸಂಸ್ಥೆಗಳ ಮೂಲಕ ಪ್ರಾರಂಭಿಸಿದರು.
ಅದರಂತೆ ಕಲ್ಯಾಣ ಕರ್ನಾಟಕದ ಡಿ.ಎಂ. ನಂಜುಂಡಪ್ಪ ವರದಿಯಲ್ಲಿ ಸೂಚಿಸಿರುವ ಇತಿಹಾಸ ಪ್ರಸಿದ್ದ ವಿಜಯನಗರ ಸಾಮ್ರಾಜ್ಯದ ಪೂರ್ವದ ರಾಜ್ಯದಾನಿ ಆನೆಗುಂದಿಯ ಭಾಗವಾದ ಅಶೋಕನ ಕಾಲದಿಂದಲೂ ಹೆಸರುವಾಸಿಯಾದ ತುಂಗಭದ್ರೆಯ ಆಣೆಕಟ್ಟಿನ ಅಂಚಿನಲ್ಲಿರುವ ಕೊಪ್ಪಳದಲ್ಲಿ ಲಂಬಾಣಿ ತಾಂಡಗಳು ಹೆಚ್ಚಾಗಿದ್ದು ಸುಲಭವಾಗಿ ತಯಾರಿಸುವ ಕಳ್ಳಭಟ್ಟಿ ಸರಾಯಿ ಇಲ್ಲಿನ ಜನರಿಗೆ ಅಗ್ಗದ ದರದಲ್ಲಿ ದೊರೆಯುವುದರಿಂದ ಈ ಭಾಗದ ಜನರು ಮದ್ಯವ್ಯಸನ ದುಷ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದರಿಂದ ನೆಮ್ಮದಿಯ ಬದುಕನ್ನು ಕಳೆದುಕೊಳ್ಳುತಿದ್ದಾರೆ. ಈ ಸಾಮಾಜಿಕ ಪಿಡುಗನ್ನು ಹೊಗಲಾಡಿಸುವ ಸಲುವಾಗಿಯೇ ಬಿಸಿಲು ನಾಡಿನಲ್ಲಿ ಸುರಭೀ ಸಂಸ್ಥೆಯು ಕೊಪ್ಪಳ ಜಿಲ್ಲೆಯಲ್ಲಿ ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರವನ್ನು 2005ರಲ್ಲಿ ಸ್ಥಾಪಿಸಿತು.
Software:- XMEye
User Name :- admin
Serial No :- d856bde673972976
IP Adress :- 192.168.0.102
ಇಂತಹ ವ್ಯಸನಿಗಳಿಗೆ ಸೂಕ್ತ ಚಿಕಿತ್ಸೆ ನೀಡುವುದರ ಮುಖಾಂತರ ಈ ದುಷ್ಚಟಗಳಿಂದ ದೂರ ಇರಲು ಸಹಕಾರಿಯಾಗುತ್ತದೆ.
ಭಾರತವು ಸೇರಿದಂತೆ ಅಭಿವೃದ್ಧಿ ಹೋಂದುತ್ತಿರುವ ದೇಶಗಳಲ್ಲಿ ಬೀಡಿ, ಸಿಗರೇಟುಗಳನ್ನು ಸೇದುವವರು ಪ್ರತೀ ವರ್ಷವು ಹೆಚ್ಚಾಗುತ್ತಿದ್ದಾರೆ ಎಂಬುದೂ ಅಂಕಿ ಅಂಶಗಳಿಂದ ತಿಳಿದು ಬಂದ ವಿಷಯ.
ಆಲ್ಕೋಹಾಲ್ ಆರೋಗ್ಯಕ್ಕೆ ಹಾನಿಕರವಾಗಿದ್ದು ಹಲವಾರು ರಾಜ್ಯದಲ್ಲಿ ಇದನ್ನು ನಿರ್ಭಂಧಿಸಿ ಜನರಿಗೆ ಆರೋಗ್ಯ ಕಲ್ಪಿಸಲು ಸಹಕಾರಿಯಾಗಿದೆ.
ವ್ಯಸನಿಗಳಿಗೆ ಚಿಕಿತ್ಸೆ ನೀಡಿ ಬಿಡುಗಡೆಗೊಳಿಸಿದ ನಂತರ ಪುನರ್ವಸತಿ ಸೌಲಭ್ಯ ಕಲ್ಪಿಸುವುದು ವ್ಯಸನ ಮುಕ್ತಿ ಕೇಂದ್ರದ ಬಹುಮುಖ್ಯ ಕಾರ್ಯ. ವ್ಯಸನಿಯು ವ್ಯಸನಕ್ಕೆ ದಾಸರಾದ ನಂತರ ಹಲವಾರು ನಷ್ಟಗಳನ್ನ ಅನುಭವಿಸುತ್ತಾನೆ ಅವುಗಳಲ್ಲಿ ಕೌಟುಂಬಿಕ ಕಲಹ, ಉದ್ಯೋಗ ನಷ್ಟ, ಆಸ್ತಿ ಹಾನಿ, ಸಂಭಂದಗಳಲ್ಲಿ ಬಿರುಕು ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ವ್ಯಸನಮುಕ್ತಿ ಕೇಂದ್ರದಲ್ಲಿ ಸೌಲಭ್ಯ ಕಲ್ಪಿಸಲಾಗುತ್ತದೆ. ವಿವಿಧ ಸಂಘ ಸಂಸ್ಥೆಗಳ ಮೂಲಕ ಸರ್ಕಾರಿ ಇಲಾಖೆಗಳ ಮೂಲಕ, ಕಾನೂನು ಸಲಹ ಕೇಂದ್ರಗಳ ಮುಖಾಂತರ, ವೃತ್ತಿ ತರಬೇತಿ ಕೇಂದ್ರಗಳ ಮುಖಾಂತರ, ಸರ್ಕಾರದ ವಿವಿಧ ಯೋಜನೆಗಳ ಮೂಖಾಂತರ ವ್ಯಸನಿಗಳಿಗೆ ಬದುಕನ್ನು ಕಟ್ಟಿಕೊಳ್ಳಲು ವ್ಯಸನ ಮುಕ್ತಿ ಕೇಂದ್ರದಲ್ಲಿ ಪುನರ್ವಸತಿ ಕೇಂದ್ರ ಕಲ್ಪಿಸಲಾಗುತ್ತದೆ.